"Globalisation" ಎನ್ನುವ ಪದ ಈಗ ಎಲ್ಲರಿಗೂ ಚಿರಪರಿಚಿತ. ಕಲ್ಪನೆಯನ್ನೇಮಾಡಲು ಸಾಧ್ಯವಾಗದಿರುವಷ್ಟುವಿಶಾಲವಾಗಿರುವ ದೊಡ್ಡ ಜಗತ್ತು ಇಂದು ಚಿಕ್ಕ ಗ್ರಾಮವಾಗಿ ಬಿಟ್ಟಿದೆ.ಅನೇಕ ವಿದೇಶಿ ಬ್ಯಾಂಕುಗಳು ಸ್ವದೇಶಕ್ಕೆ ಲಗ್ಗೆ ಇಟ್ಟಿವೆ,ಇಡುತ್ತಿವೆ. ಯಾವುದೊ ಹೆಸರಿನ ಕಂಪೆನಿಯೊಂದು ಇನ್ಯಾವುದೋ ಹೆಸರಿನ ಕಂಪೆನಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮತ್ಯಾವುದೋ ಹೆಸರಿನೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. ಕಾಲ್ ಸೆಂಟರ್, ಬಿ. ಪಿ. ಓ. ಸಾಮಾನ್ಯ ಜನರಿಗೂ ಸಾಮಾನ್ಯ ಪದವಾಗಿ ಬಿಟ್ಟಿದೆ. ಭಾರತ ದೇಶದ ಉದ್ಯೋಗಿಯೊಬ್ಬ ಮಧ್ಯರಾತ್ರಿಯ ಹೊತ್ತಲ್ಲಿ ಅಮೇರಿಕ ದೇಶದ ಮತ್ಯಾರೋ ವ್ಯಕ್ತಿಯೊಂದಿಗೆ ನಾಲಗೆಯನ್ನು 'ಟ್ವಿಸ್ಟ್' ಮಾಡಿ ಅವನದ್ದೇ ಬಾಷೆಯಲ್ಲಿ ಮಾತನಾಡುವ ಕೆಟ್ಟ ಪ್ರಯತ್ನವನ್ನು ಮಾಡುತಿದ್ದಾನೆ. ಇಂಟರ್ನೆಟ್, ಚಾಟಿಂಗ್, ಮೊಬೈಲ್, 3g , ಫೇಸ್ ಬುಕ್, ಟ್ವಿಟ್ಟರ್... ಹೀಗೆ ಹಲವರು ಪದಗಳು ಅವಿಧ್ಯಾವಂತನ ಬಾಯಲ್ಲೂ ನಲಿದಾಡುತ್ತಿವೆ.ಫೇಸ್ ಬುಕ್ ನಿಂದ ಪ್ರಭಾವಿತನಾಗಿ ಇಲ್ಲೊಬ್ಬ ತನ್ನ ನಾಯಿ ಮರಿಗೆ ಅದೇ ಹೆಸರನ್ನು ಇಟ್ಟರೆ, ಅಲ್ಲೊಬ್ಬಳು ತನ್ನ
ಹೆಣ್ಣು ಮಗುವಿಗೆ'like'ಎಂದು ಹೆಸರಿಡುವ ಯೋಚನೆಯಲ್ಲಿದ್ದಾಳೆ. ಹಾಲಿಡೆಯಾದ ಸಂಡೆ ಎರಡು ಮೂರು ಮಾಲ್ ಗಳನ್ನೂ ಸುತ್ತಾಡಿ, ಸಂಜೆ ಹೊತ್ತಿಗೆಯಾವುದೊ ಒಂದು ಸಿನೆಮಾ ನೋಡಿ, ರಾತ್ರಿಹೊತ್ತಿಗೆ ರೆಸ್ಟಾರೆಂಟ್ ನಲ್ಲಿ 'ಡಿನ್ನರ್'ಮುಗಿಸುವುದು ನಮಗೆ ರೂಢಿಯಾಗಿಬಿಟ್ಟಿದೆ.
"Globalisation"ಎನ್ನುವಕಾನ್ಸೆಪ್ಟುವಿದೇಶಿಯರ ಕೊಡುಗೆಯಗಿದ್ದರೂ,ಇದನ್ನು ಮೊತ್ತ ಮೊದಲಿಗೆ ಜಗತ್ತಿಗೆ ಪರಿಚಯಿಸಿದವರು ನಾವು ಭಾರತಿಯರೇ. "ವಸುಧೈವ ಕುಟುಂಬಕಂ"ಎಂದುನಾವು ಎಂದೇ ಹೇಳಿ ಬಿಟ್ಟಿದ್ದೇವೆ.ವಿದೇಶಿಗರು ಜಗತ್ತನ್ನು ಗ್ರಾಮದ ರೂಪದಲ್ಲಿ ಕಂಡರೆ ನಾವು ಇನ್ನೂ ಮುಂದೆ ಹೋಗಿ 'ಈ ಪ್ರಿಥ್ವಿಯೇ ಒಂದು ಕುಟುಂಬ' ಎಂದು ಅಂದೇ ಸಾರಿಬಿಟ್ಟಿದ್ದೇವೆ. ಇದು ಒಂದು ಸುಂದರ ಪರಿಕಲ್ಪನೆ. ಜಗತ್ತೇ ಒಂದು ಕೂಡು ಕುಟುಂಬವೆಂದ ನಾವು ವಿಶ್ವ ಶಾಂತಿಗೆ ಮುನ್ನುಡಿ ಬರೆದವರು."Globalisation"ದೇಶ,ಗಡಿ,ವ್ಯಕ್ತಿಗಳನ್ನು ಹತ್ತಿರವಾಗಿಸಿದರೂ ಇಲ್ಲಿ ಪ್ರತಿಯೊಂದನ್ನು ವ್ಯಾಪಾರೀಕರಣದ ಸರಕಾಗಿ ಕಾಣಲಾಗುತ್ತದೆ. ಇಲ್ಲಿ ಉತ್ತಮ ಅವಕಾಶಗಳಿದ್ದರೂ ಸಹ ಅಡ್ಡ ಪರಿಣಾಮಗಳೇ ಜ್ಯಾಸ್ತಿ. "Globalisation" ನಿಂದಾಗಿ ಗ್ಲೋಬಲ್ ವಾರ್ಮಿಂಗ್ ಜ್ಯಾಸ್ತಿಯಾಗಿ ಬಿಟ್ಟಿದೆ. ಧ್ರುವಗಳ ಮಂಜುಗಡ್ಡೆ ಕರಗುವುದು ಒಂದು ಕಡೆಯಾದರೆ, ಮನುಷ್ಯ-ಮನುಷ್ಯನ ಮಧ್ಯೆ ಹೊಟ್ಟೆ ಕಿಚ್ಚು, ಮೋಸ, ವಂಚನೆಗಳ ಉರಿಯೂ ಜ್ಯಾಸ್ತಿಯಗುತ್ತಿವೆ. ಗ್ಲೋಬಲ್ ವಾರ್ಮಿಂಗ್ ನ ಬಿಸಿ ನಮ್ಮ ಕೆಲವು ಹೆಣ್ಣು ಮಕ್ಕಳಿಗೆ ಸ್ವಲ್ಪ ಜ್ಯಾಸ್ತಿಯೇ ತಟ್ಟಿರಬೇಕು. ಅದಕ್ಕೆ ಇರಬೇಕು, ದಿನಕಳೆದಂತೆ ಅವರ ಉಡುಗೆ ತೊಡುಗೆಗಳು ಚಿಕ್ಕದಾಗುತ್ತಿವೆ.
ನಿಜ ಹೇಳಬೇಕೆಂದರೆ "ವಸುಧೈವ ಕುಟುಂಬಕಂ" ಎಂದು ಜಗತ್ತಿಗೆ ಕೂಗಿ ಹೇಳಿದ ಭಾರತೀಯರಿಗೆ ಅದನ್ನು ಪರಿಪಾಲಿಸಲು ಸಾದ್ಯವಾಗಲಿಲ್ಲ. ನಾವು ಜಾತಿ-ನೀತಿಗಳ ಸಂಘರ್ಷದಲ್ಲಿ ಬಳಲಿ ಬೆಂದಾದೆವು.ಕುಲ ಕೆಡುತ್ತದೆಂದು ವಿದೇಶ ಯಾನ, ಸಮುದ್ರಯಾನಗಳನ್ನೂ ನಿರ್ಭ0ದಿಸಲಾಯಿತು. ಇದೆ ಕಾರಣಕ್ಕಾಗಿಯೇ ಜೀವನ ಮಾರ್ಗೋಪಾಯಗಳನ್ನು ಹೇಳಿಕೊದಬೇಕಾಗಿದ್ದ "ಸನಾತನ ಧರ್ಮ' ಭಾರತಕ್ಕಷ್ಟೇ ಸೀಮಿತವಾಗಬೇಕಾಯಿತು. ನಮ್ಮಲ್ಲಿ ವಿದೇಶಕ್ಕೆ ತೆರಳಿ ಭ್ರಾತ್ರುತ್ವವನ್ನು, ಹಿಂದೂ ಧರ್ಮವನ್ನು ಪ್ರಸ್ತುತ ಪಡಿಸಿದ ವಿವೆಕಾನಂದರಂತವರು ಬೆರಳೆಣಿಕೆಯಷ್ಟೇ. ಆದರೆ ವಿದೇಶಿಯರು ಭಾರತಕ್ಕೆ ಬಂದಾಗ ಸಖ್ಯ ಬೆಳೆಸಿದವರು ನಾವು. ಅವರು ಸಾಕು ಸಾಕು ಎನ್ನುವವರೆಗೂ ನಮ್ಮ ಸಂಪತನ್ನು ಅವರಿಗೆ ಧಾರೆಯೆರೆದೆವು.ಆದರೂ ಋಷಿ, ಮುನಿ ದೇವತೆಗಳಿಂದ ಹರಸಲ್ಪಟ್ಟ ಈ ಪುಣ್ಯ ಭೂಮಿಯನ್ನು ಯಾರಿಂದಲೂ ಏನೂ ಮಾಡಲಾಗಲಿಲ್ಲ.
ಆಧುನಿಕ ಯುಗದಲ್ಲೂ ಸಹ ವಿದೇಶಿ ಮಾರುಕಟ್ಟೆಯನ್ನು ಸ್ವಾಗತಿಸುವಲ್ಲಿ ಭಾರತವು ಹಿಂದುಳಿಯಲಿಲ್ಲ. ಇದರಿಂದ ಉದ್ಯೋಗ, ಇನ್ನಿತರ ಅವಕಾಶಗಳೂ ಹೆಚ್ಚಾದವು.ಆದರೂ ನಾವಿಂದು ನಮ್ಮ ತನವನ್ನು ಕಳೆದುಕೊಳ್ಳುತಿದ್ದೇವೆ. ದೂರದ ಬೆಟ್ಟವನ್ನೇ ಸುಂದರವೆನ್ದುಕೊಂಡು ಅದನ್ನೇ ಪಡೆಯುವ, ಅನುಕರಣೆ ಮಾಡುವ ಮಟ್ಟಕ್ಕೆ ಇಳಿದು ಬಿಟ್ಟಿದ್ದೇವೆ.ನಮಗೆ ಶ್ರೀ ರಾಮಚಂದ್ರನಂತವರೆ ಅದರ್ಶಪ್ರಾಯರಾಗಿರಬೇಕೆ ಹೊರತು ಕಪಟ ವೇಷದಲ್ಲಿ ಸೀತೆಯನ್ನು ಅಪಹರಿಸಿದ ರಾವಣನಂತವರಲ್ಲ.
ರಾಮನು ತಂದೆಯ ಮಾತನ್ನು ಪಾಲಿಸಲೋಸುಗ ಸ್ವಂತ ಊರಾದ ಅಯೋಧ್ಯೆಯನ್ನು ಬಿಟ್ಟು ಕಾಡಿಗೆ ತೆರಳುತ್ತಾನೆ. ಮುಂದೆ ಸೀತಾಪಹರನವಾದ ಬಳಿಕ ವಾನರರೊಂದಿಗೆ ಸಖ್ಯ ಬೆಳೆಸಿ ಸೇನೆ ನಿರ್ಮಾಣ ಮಾಡಿ ಭಾರತ ದೇಶವನ್ನು ಬಿಟ್ಟು ದೂರದ ಲಂಕೆಗೆ ಅಡಿಯಿಡುತ್ತಾನೆ. ಹೀಗೆ ಅವನ ಮಾತಿನ ವೈಖರಿ, ಕಾರ್ಯಸಾಧನೆಯಿಂದ ಇಂದಿನ ಕಾರ್ಪರೇಟ್ ಕಂಪೆನಿಗಳು ಕಲಿಯುವುದು ಬಹಳಷ್ಟಿದೆ. ಮುಂದೆ ರಾವಣ ಸಂಹಾರವಗುತ್ತದೆ. ಸ್ವರ್ಣ ನಗರಿ ಲಂಕೆಯ ಚೆಲುವನ್ನು ಕಂಡಂತಹ ಲಕ್ಷ್ಮಣ, ಜೀವನ ಪರ್ಯಂತ ಅಲ್ಲೇ ವಾಸ ಮಾಡುವ ಇಚ್ಚೆಯನ್ನು ವ್ಯಕ್ತಪಡಿಸುತ್ತಾನೆ. ರಾಮನು ಇದಕ್ಕೇನಾದರೂ ಅನುಮೋದನೆ ಕೊಟ್ಟಿದ್ದರೆ ರಾಮಾಯಣಕ್ಕೆ ಒಂದು ಒಳ್ಳೆ 'ಟ್ವಿಸ್ಟ್' ಸಿಗುತಿತ್ತು. ಆದರೆ ರಾಮನು ಲಕ್ಷ್ಮಣನಿಗೆ' ತಮ್ಮಾ, ಲಂಕೆಯು ಚಿನ್ನದಿಂದ ಮಾಡಿದರೂ ತಾಯಿನಾಡೆ ನನಗೆ ಶ್ರೇಷ್ಠ (ಜನನಿ ಜನ್ಮ ಬೂಮಿಶ್ಚ ಸ್ವರ್ಗಾದಪಿ ಗರೀಯಸಿ)' ಅಂದು ಬಿಡುತ್ತಾನೆ.
ಅಧುನಿಕ ಯುಗದಲ್ಲಿ ನಾವು ಹೊಟ್ಟೆಪಾಡಿಗೋಸ್ಕರ ತಾಯಿನಾಡನ್ನು ಬಿಡುವುದು, ಎಲ್ಲೋ ಜೀವನ ಮಾಡುವುದು, ಮತ್ತೆಲ್ಲೋ ದುಡಿಯುವುದು ಅನಿವಾರ್ಯವಾಗಿದೆ.ಅದ್ದರಿಂದ ವಸುಧೆಯೇ ಒಂದು ಫ್ಯಾಮಿಲಿ ಎಂದು ತಿಳಿದುಕೊಂಡು ಎಲ್ಲೇ ಆದರೂ
ಖುಷಿಯಿಂದ ಬಾಳೋಣ. ಆದರೆ ಜನ್ಮ ಭೂಮಿಯಾದ ನಮ್ಮ ನಾಡು, ಸಂಸ್ಕೃತಿ, ಬಾಷೆಯನ್ನು ಎಂದೂ ಮರೆಯದಿರೋಣ.
nice article
ReplyDeletenice article
ReplyDeleteNice article sir
ReplyDelete