ಎರಡೂವರೆ ವರ್ಷಗಳ ಹಿಂದೆ ಕಲ್ಬುರ್ಗಿ ( ಹಿಂದಿನ ಗುಲ್ಬರ್ಗ) ನಗರಕ್ಕೆ ಪೋಸ್ಟಿಂಗ್ ಅದಾಗ ಮನದಲ್ಲೇನೋ ಅಂಜಿಕೆ. ಸ್ವಂತ ಊರಾದ ಮಂಗಳೂರಿನಿಂದ ತುಂಬಾ ದೂರವಾಗುವ ವಿಚಾರವೊಂದಾದರೆ, ಇಡೀ ಉತ್ತರ ಕರ್ನಾಟಕದ ಬಗ್ಗೆ ಏನೋ ಒಂದು ಭಾವನೆ ಮನೆ ಮಾಡಿತ್ತು. ಯಾವುದೇ ಪ್ರದೇಶವಿರಲಿ ಯಾ ನಗರವಿರಲಿ, ಅದನ್ನು ಮಂಗಳೂರಿನೊಂದಿಗೆ ತಾಳೆ ಹಾಕಿ ನೋಡುವುದು ನನ್ನ ಸ್ವಭಾವ. ವಿಸ್ತೀರ್ಣಥೆಯನ್ನು ನೋಡಿದರೆ ನಗರ ಬಹಳವೇ ದೊಡ್ಡದು. ಈ ಭಾಗದ ಜನರೇ ಹೇಳುವಂತೆ ಇದು ಹಿಂದುಳಿದ ಪ್ರದೇಶ. ಇದಕ್ಕೆ ಇಲ್ಲಿಂದ ಗೆದ್ದು ಬಂದಂತಹ ರಾಜಕಾರಣಿಗಳ ಕೊಡುಗೆಯಂತು ಬಹಳವೇ. ಶಿಕ್ಷಣ ಮಟ್ಟ ತೀರ ಕಳಪೆ ಮಟ್ಟದಲ್ಲಿಲ್ಲದಿದ್ದರು ಅತ್ಯುತ್ತಮವೆಂದು ಹೇಳುವಂತಿಲ್ಲ. ಹಲವರು ಆಸ್ಪತ್ರೆಗಳಿದ್ದರೂ ಉನ್ನತ ಚಿಕಿಸ್ತೆಗಾಗಿ ರೋಗಿಗಳು ಹೈದ್ರಬಾದಿಗೋ ಇಲ್ಲ ಬೆಂಗಳೂರಿಗೋ ಹೋಗಲೇ ಬೇಕು.
ಕಲಬುರ್ಗಿಯ ಬಗ್ಗೆ ಏನೇ ಕಪೋಕಲ್ಪಿತವಿರಲಿ, ಕಳೆದ ಎರಡೂವರೆ ವರ್ಷಗಳಿಂದ ನಾನು ಗಮನಿಸಿದಂತೆ ನಗರವಂತೂ ಬೆಳೆಯುತ್ತಲಿದೆ. ರಾಜಕಾರಣಿಗಳೂ ಇತ್ತ ಕಡೆ ಮುಖ ಮಾಡಿದಂತಿದೆ. ರಸ್ತೆಗಳು ಅಗಲಗೊಳ್ಳುತಿದೆ, ಕಟ್ಟಡ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ಅನೇಕ ಶಾಪಿಂಗ್ ಕಾಂಪ್ಲೆಕ್ಸುಗಳು ಈಗಾಗಲೇ ತಲೆ ಎತ್ತಿವೆ.ಯಾವುದೇ ಬ್ರಾಂಡೆಡ್ ಮಾಲುಗಳು ಈಗ ಇಲ್ಲಿ ಲಬ್ಯ. ಪ್ರಮುಖ ವಾಣಿಜ್ಯ ಬ್ಯಾಂಕುಗಳು ಇತ್ತ ಕಡೆ ಬರುತ್ತಿವೆ.ಕರ್ನಾಟಕದ ಹಲವಾರು ನಗರಗಳಲ್ಲೇ ಇಲ್ಲದ ಮಲ್ಟಿಪ್ಲೆಕ್ಸ್ ಗಳು ಇಲ್ಲಿವೆ.
ಕಲ್ಬುರ್ಗಿ ನಗರವಂತೂ ಬಿಸಿಲಿನ ಬೇಗೆಗೆ ಪ್ರಸಿದ್ಧ. ಹೀಗಿದ್ದರೂ ನಗರವನ್ನು ತಂಪುಗೊಳಿಸಲು ಅನೇಕ ಉದ್ಯಾನವನಗಳು ಸೃಷ್ಟಿ ಆಗಿವೆ.ಕರ್ನಾಟಕ ಇತಿಹಾಸದ ಮುಖ್ಯ ಸ್ಥಳಗಳು ಇಲ್ಲಿರುವುದರಿಂದ ಪ್ರವಾಸಿಗಳಿಗೂ ಇದು ಅತ್ಯುತ್ತಮ ಆಯ್ಕೆ.ಮೆಡಿಕಲ್, ಇಂಜಿನಿಯರ್ ಕಾಲೇಜುಗಳೂ ಆರಂಭಗೊಂಡಿರುವ ಕಾರಣ ಅಕ್ಕ ಪಕ್ಕದ ನಗರಗಳಿಂದಲೂ ವಿದ್ಯಾರ್ಥಿಗಳು ಬರುತ್ತಾರೆ. ಈ ಸಲದ ಪಿ ಯು ಸಿ ಹಾಗು ಎಸ್ ಎಸ್ ಎಲ್ ಸಿ ಯಲ್ಲೂ ಅನೇಕರು ಉತ್ತಮ ಸಾಧನೆಯನ್ನು ಮಾಡಿದ್ದಾರೆ.
ನಗರವಂತೂ ದಿನೇ ದಿನೇ ಸುಂದರಗೊಳ್ಳುತಿದ್ದೆ. ಇದಕ್ಕೆ ನಾನು ಬಂದ ಕಾರಣವೂ ಇರಬಹುದು.
ಏನೇ ಇರಲಿ, ಮಂಗಳೂರಿನವನಾದ ನಾನು ಹೇಳುವುದಿಷ್ಟೇ ........ ಅಲ್ಲಿದೆ ನನ್ನ ಮನೆ....ಇಲ್ಲಿ ಬಂದೆ ಸುಮ್ಮನೆ......
Superb anna :)
ReplyDeleteeno search madtha ide facebook nalli nim link sigathu , thumba chenag bardidira.....
Idannu http://NammaGulbarga.com nalli post maduthenne :)